Telegram Join My Telegram WhatsApp Join My WhatsApp

HESCOM Recruitment 2026 – 388 ITI Electrician Apprentice Posts

ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿರುವ Hubli Electricity Supply Company Limited (HESCOM) ಸಂಸ್ಥೆ 2026–27ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯಡಿಯಲ್ಲಿ ಒಟ್ಟು 388 ಎಲೆಕ್ಟ್ರಿಷಿಯನ್ ಅಪ್ರೆಂಟಿಸ್ (Apprentice) ಹುದ್ದೆಗಳು ಭರ್ತಿ ಮಾಡಲಾಗುತ್ತಿವೆ. ಐಟಿಐ (ITI) ಎಲೆಕ್ಟ್ರಿಷಿಯನ್ ಕೋರ್ಸ್ ಪೂರ್ಣಗೊಳಿಸಿ ಸರ್ಕಾರಿ ಕ್ಷೇತ್ರದಲ್ಲಿ ತರಬೇತಿ ಹಾಗೂ ಅನುಭವ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.

HESCOM ಕರ್ನಾಟಕದ ಪ್ರಮುಖ ವಿದ್ಯುತ್ ವಿತರಣೆ ಸಂಸ್ಥೆಯಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮತ್ತು ನಿರ್ವಹಣೆ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆದರೆ ಭವಿಷ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವಿದ್ಯುತ್ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ದೊರಕುವ ಸಾಧ್ಯತೆ ಹೆಚ್ಚುತ್ತದೆ.ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 

HESCOM Recruitment 2026 – ಪ್ರಮುಖ ವಿವರಗಳು:-

  • ಸಂಸ್ಥೆ ಹೆಸರು: HESCOM

  • ಹುದ್ದೆ ಹೆಸರು: Electrician Apprentice (ಶಿಶುಕ್ಷು)

  • ಒಟ್ಟು ಹುದ್ದೆಗಳು: 388

  • ತರಬೇತಿ ಅವಧಿ: 1 ವರ್ಷ

  • ಮಾಸಿಕ ಸ್ಟೈಫಂಡ್: ₹9,600/-

  • ಅರ್ಜಿ ವಿಧಾನ: Offline

  • ಕೆಲಸದ ಸ್ಥಳ: ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗಗಳು, 33KV ಉಪಕೇಂದ್ರಗಳು

  • ಅರ್ಜಿ ಕೊನೆಯ ದಿನಾಂಕ: 09 ಮಾರ್ಚ್ 2026

 ಹುದ್ದೆಗಳ ವಿವರ:-

ಈ ನೇಮಕಾತಿಯಡಿಯಲ್ಲಿ ಕೇವಲ ಎಲೆಕ್ಟ್ರಿಷಿಯನ್ ಟ್ರೇಡ್ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಇತರ ಯಾವುದೇ ಐಟಿಐ ಟ್ರೇಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಒಟ್ಟು 388 ಹುದ್ದೆಗಳು ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಹಂಚಿಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ವಿದ್ಯುತ್ ಉಪಕರಣಗಳ ನಿರ್ವಹಣೆ, ಲೈನ್ ಪರಿಶೀಲನೆ, ಉಪಕೇಂದ್ರ ಕಾರ್ಯಾಚರಣೆ ಹಾಗೂ ತಾಂತ್ರಿಕ ಕಾರ್ಯಗಳಲ್ಲಿ practically ಅನುಭವ ಪಡೆಯುತ್ತಾರೆ.

ವಿದ್ಯಾರ್ಹತೆ (Educational Qualification):-

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  1.  ಸರ್ಕಾರ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ವರ್ಷದ ITI Electrician ಪಾಸಾಗಿರಬೇಕು
  2. NCVT / SCVT ನೀಡಿದ National Trade Certificate ಹೊಂದಿರಬೇಕು
  3. SSLC ಪರೀಕ್ಷೆಯಲ್ಲಿ ಕನ್ನಡ ಭಾಷೆ ಒಂದು ವಿಷಯವಾಗಿರಬೇಕು
  4.  ಕನ್ನಡದಲ್ಲಿ ಓದಲು ಮತ್ತು ಬರೆಯಲು ತಿಳಿದಿರಬೇಕು

ಸೂಚನೆ :- 

  • ಈಗಾಗಲೇ ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿರುವವರು ಅರ್ಹರಲ್ಲ
  • ತರಬೇತಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ

ವಯೋಮಿತಿ (Age Limit as on 09.03.2026):-

  • ಸಾಮಾನ್ಯ ವರ್ಗ – ಗರಿಷ್ಠ 25 ವರ್ಷ

  • SC/ST ಅಭ್ಯರ್ಥಿಗಳು – ಗರಿಷ್ಠ 30 ವರ್ಷ

ವಯೋಮಿತಿ ಲೆಕ್ಕಾಚಾರವನ್ನು 09 ಮಾರ್ಚ್ 2026 ದಿನಾಂಕದ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

ಅರ್ಜಿ ಶುಲ್ಕ (Application Fees) :-

  • ಸಾಮಾನ್ಯ ಅಭ್ಯರ್ಥಿಗಳು – ₹100/-

  • SC/ST ಅಭ್ಯರ್ಥಿಗಳು – ₹50/-

ಪಾವತಿ ವಿಧಾನ:
Indian Postal Order ಮೂಲಕ “ಆರ್ಥಿಕ ಸಲಹೆಗಾರರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ” ಹೆಸರಿನಲ್ಲಿ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.
ಬ್ಯಾಂಕ್ ಡಿಡಿ ಅಥವಾ ನಗದು ಸ್ವೀಕರಿಸಲಾಗುವುದಿಲ್ಲ.

 ಅರ್ಜಿ ಸಲ್ಲಿಸುವ ವಿಧಾನ (How to Apply):-

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ.

ಹಂತ 1 – Online Registration

ಅಭ್ಯರ್ಥಿಗಳು ಮೊದಲು Apprenticeship Portal ನಲ್ಲಿ ನೋಂದಣಿ ಮಾಡಬೇಕು:
 www.apprenticeshipindia.gov.in

  • Aadhaar Verification ಪೂರ್ಣಗೊಳಿಸಬೇಕು

  • Hubli Electricity Supply Company Limited ಆಯ್ಕೆ ಮಾಡಬೇಕು

  • Portal ನಲ್ಲಿ ನೋಂದಣಿ ಮಾಡುವ ಕೊನೆಯ ದಿನಾಂಕ – 02 ಮಾರ್ಚ್ 2026

ಹಂತ 2 – Offline Application Submission

ಎ -4 size  ಹಾಳೆಯಲ್ಲಿರುವ ನಿಗದಿತ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳ ಸ್ವಯಂ ದೃಢೀಕರಿಸಲ್ಪಟ್ಟ self attested ನಕಲು ಪ್ರತಿಗಳನ್ನು ಲಗತ್ತಿಸಬೇಕು

  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಎರಡು ವರ್ಷದ ಐಟಿಐ ಎಲೆಕ್ಟ್ರಿಷಿಯನ್ ಅಂಕಪಟ್ಟಿ
  • ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ಪಡೆದ ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ( medical fitness certificate).
  • ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ ಮಾತ್ರ).
  • ಆಧಾರ್ ಕಾರ್ಡ್
  • ಒಂದು ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ.
  • ಅಪ್ರೆಂಟಿ ಶಿಪ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡ ಪ್ರಿಂಟ್ ಔಟ್ ಪ್ರತಿ.

ಅರ್ಜಿ ಕಳುಹಿಸಬೇಕಾದ ವಿಳಾಸ:

ಕಾರ್ಯನಿರ್ವಾಹಕ ಇಂಜಿನಿಯರ್ (ವಿ)
ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ)
ಹೆಸ್ಕಾಂ, ವಿದ್ಯುತ್ ನಗರ
ಕಾರವಾರ ರಸ್ತೆ, ಹುಬ್ಬಳ್ಳಿ – 580024

ಕೊನೆಯ ದಿನಾಂಕ: 09 ಮಾರ್ಚ್ 2026 (ಸಂಜೆ 4:00 ಗಂಟೆ ಒಳಗೆ)

ಪ್ರಮುಖ ದಿನಾಂಕಗಳು:-

  • ಅರ್ಜಿ ಪ್ರಾರಂಭ ದಿನಾಂಕ – 11 ಫೆಬ್ರವರಿ 2026

  • Apprenticeship Portal ನೋಂದಣಿ ಕೊನೆಯ ದಿನಾಂಕ – 02 ಮಾರ್ಚ್ 2026

  • Offline ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ – 09 ಮಾರ್ಚ್ 2026

 ತರಬೇತಿ ವೇಳೆ ಕೆಲಸದ ಸ್ಥಳ:-

ಆಯ್ಕೆಯಾದ ಅಭ್ಯರ್ಥಿಗಳಿಗೆ HESCOM ಕಾರ್ಯ ಮತ್ತು ಪಾಲನಾ ವಿಭಾಗಗಳು, ಮೀಟರ್ ತಪಾಸಣೆ ವಿಭಾಗಗಳು, 33KV ಉಪಕೇಂದ್ರಗಳು ಹಾಗೂ ಲೈನ್ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಅವಧಿಯಲ್ಲಿ ತಾಂತ್ರಿಕ ಅನುಭವದ ಜೊತೆಗೆ ಪ್ರಾಯೋಗಿಕ ಜ್ಞಾನ ಹೆಚ್ಚುತ್ತದೆ.

 ಪ್ರಮುಖ ಸೂಚನೆಗಳು

  • ಅರ್ಜಿಯಲ್ಲಿ ನೀಡುವ ಹೆಸರು, ಜನ್ಮ ದಿನಾಂಕ, ಜಾತಿ ಮಾಹಿತಿ ಎಲ್ಲವೂ ಸರಿಯಾಗಿರಬೇಕು

  • ತಪ್ಪು ದಾಖಲೆ ಸಲ್ಲಿಸಿದರೆ ಆಯ್ಕೆಯಾದ ನಂತರವೂ ರದ್ದು ಮಾಡಬಹುದು

  • ಆಯ್ಕೆ ಪ್ರಕ್ರಿಯೆಯ ಮಾಹಿತಿ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ

  • ಪ್ರತ್ಯೇಕವಾಗಿ ಕರೆ ಪತ್ರ ಅಥವಾ ಇಮೇಲ್ ಕಳುಹಿಸಲಾಗುವುದಿಲ್ಲ

 ಎಚ್ಚರಿಕೆ:-

ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಿ ಆಯ್ಕೆಯಾಗಿದ್ದರೆ:

  • ಪ್ರವೇಶ ರದ್ದು ಮಾಡಲಾಗುತ್ತದೆ

  • ನೀಡಲಾದ ಶಿಶುಕ್ಷು ವೇತನವನ್ನು ವಶಪಡಿಸಿಕೊಳ್ಳಲಾಗುತ್ತದೆ

ಹೆಸ್ಕಾಂ ಈ ಸಂಬಂಧ ಯಾವುದೇ ಪ್ರತ್ಯೇಕ ಪತ್ರ ವ್ಯವಹಾರ ನಡೆಸುವುದಿಲ್ಲ. 

Apply Link:-   https://hescom.karnataka.gov.in

📞 ಸಂಪರ್ಕ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836 2956611

READ MORE :-    https://udyogasihi.com/upsc-recruitment-2026-349-assistant-commandant-post/

1 thought on “HESCOM Recruitment 2026 – 388 ITI Electrician Apprentice Posts”

Leave a Comment